ಕಾಕು-260 ವಾಹನ ಖರೀದಿಗೆ ಸುಲಭ ಮಾರ್ಗ- ವಾಹನ ಸಾಲ

ಗುರುಗುಂಟಿರಾಯರ ಅಕ್ಕನ ಮಗ ಆರು ತಿಂಗಳುಗಳ ಹಿಂದೆಯಷ್ಟೇ ಒಂದೇ ಒಂದು ಫೋನ್ ಕಾಲ್ ಆಧರದಲ್ಲಿ ಬ್ಯಾಂಕಿಗೆ ಹೋಗಿ ಸುಲಭವಾಗಿ ಸಾಲ ತೆಗೆದುಕೊಂಡು ಒಂದು ಕಾರು ಖರೀಧಿಸಿದ್ದಾನೆ. ಅದ್ಯಾವ ಲೋನ್ ತೆಗೆದುಕೊಂಡಿದ್ದಿ ಮಾರಾಯ ಅಂತ ಕೆಳಿದರೆ ಆತನಿಗೆ ಅದು ಗೊತ್ತಿಲ್ಲ. ಅದ್ಯಾರೋ ಬ್ಯಾಂಕಿನಿಂದ ಕಾಲ್ ಮಾಡಿದರು ಅತಿ ಸುಲಭದಲ್ಲಿ ಹತ್ತೇ ನಿಮಿಷದಲ್ಲಿ ಸ್ಯಾಲರಿ ಸ್ಲಿಪ್ ಪ್ರತಿ ಕೊಟ್ಟು ಸಾಲ ಸಾಲದ ಚೆಕ್ ಜೇಬಿಗೇರಿಸಿ ಬಂದೆ ಎನ್ನುತ್ತಾನೆ ಮಹಾರಾಯ. ಯಾವ ಸಾಲ ಎಷ್ಟು ಬಡ್ಡಿ ಎಷ್ಟು ಕಂತು ಇತ್ಯಾದಿಗಳನ್ನು ಹೆಚ್ಚಾಗಿ ತಲೆಗೆ ಹಚ್ಚಿಕೊಳ್ಳದೆ ಅತ್ಯಂತ ಸುಲಭವಾಗಿ ಸಿಗುತ್ತದೆ ಎನ್ನುವ ಏಕೈಕ ಕಾರಣಕ್ಕೆ ಜಾಸ್ತಿ ಬಡ್ಡಿ ದರದ ಪರ್ಸನಲ್ ಲೋನ್ ತೆಗೊಂಡು ಬಂದಿದ್ದಾನೆ ಅಳಿಯ ಮಹಾಶಯ. ಮಾವನಿಗೆ ತಕ್ಕ ಅಳಿಯ !!

***
ಗೃಹ ಸಾಲ, ವಿದ್ಯಾ ಸಾಲಗಳು ಇರುವಂತೆ ವಾಹನ ಕೊಳ್ಳಲೂ ಸಹ ಪ್ರತ್ಯೇಕವಾದ ಸಾಲದ ಯೋಜನೆ ಇದೆ. ವಾಹನಕ್ಕಾಗಿ ಸಾಲ ಬೇಕಾದವರು ಈ ಯೋಜನೆಯ ಮೊರೆಹೊಕ್ಕಬಹುದು.ತಿ ಸುಲಭವಾಗಿ ಸಿಗುವ ಆದರೆ ಜಾಸ್ತಿ ಬಡ್ಡಿ ದರವನ್ನು ಹಿಂಡುವ ಪರ್ಸನಲ್ ಲೋನ್ ಪಡೆದುಕೊಳ್ಳುವ ಅಗತ್ಯವಿಲ್ಲ.

ವಾಹನ ಸಾಲವನ್ನು ಬ್ಯಾಂಕುಗಳು ಹಾಗೂ ಬ್ಯಾಂಕೇತರ ವಿತ್ತೀಯ ಸಂಸ್ಥೆಗಳೂ ನೀಡುತ್ತವೆ. ಬಹುತೇಕ ಎಲ್ಲಾ ಬ್ಯಾಂಕುಗಳೂ ಕೆಲ ಕೊ-ಓಪರೇಟಿವ್ ಬ್ಯಾಂಕುಗಳೂ ವಾಹನ ಸಾಲ ನೀಡುತ್ತವೆ. ವಾಹನ ಸಾಲದ ನಿಯಮಗಳು ಬ್ಯಾಂಕುಗಳಿಂದ ಬ್ಯಾಂಕಿಗೆ ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಹೊಂದಿರುತ್ತವೆ. ಬಡ್ಡಿ ದರಗಳಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ; ಜೊತೆಗೆ ಇತರ ಷರತ್ತುಗಳಲ್ಲೂ ವ್ಯತ್ಯಾಸಗಳಿರುತ್ತವೆ. ಸಾಲ ಪಡೆಯುವ ಮುನ್ನ ಎಲ್ಲಾ ಶರತ್ತುಗಳನ್ನೂ ಸರಿಯಾಗಿ ಪರಿಶೀಲಿಸಿ ನೋಡುವುದು ಯುಕ್ತ.

ಉದ್ಧೇಶ:

ಬ್ಯಾಂಕುಗಳು ನಾಲ್ಕು ಚಕ್ರದ ಮತ್ತು ಎರಡು ಚಕ್ರದ ಮೋಟಾರು ವಾಹನಗಳಿಗಾಗಿ ಸಾಲದ ಸೌಲಭ್ಯವನ್ನು ನೀಡುತ್ತದೆ. ಹೊಸ ವಾಹನಗಳಿಗೆ ಮತ್ತು ಕೆಲವು ಷರತ್ತುಗಳ ಅಡಿಯಲ್ಲಿ ಹಳೆ ವಾಹನಗಳಿಗೂ ಸಾಲ ದೊರಕುತ್ತದೆ. ಹೆಚ್ಚಾಗಿ ೩ ವರ್ಷಕ್ಕಿಂತ ಜಾಸ್ತಿ ಹಳೆಯ ೪-ಚಕ್ರ ವಾಹನಗಳಿಗೆ ಬ್ಯಾಂಕುಗಳು ಸಾಲ ಕೊಡುವುದಿಲ್ಲ. ಕೆಲವೆಡೆ ಇದು ೫ ವರ್ಷ. ೨-ಚಕ್ರದಲ್ಲಿ ಸಾಲ ಬಹುತೇಕ ಹೊಸವಾಹನಗಳಿಗೆ ಮಾತ್ರ ಲಭ್ಯ.

ಅರ್ಹತೆ:

ಸಾಮಾನ್ಯವಾಗಿ ೨೧ ರಿಂದ ೬೫ ವಯೋಮಾನದ ವ್ಯಕ್ತಿಗಳಿಗೆ ವಾಹನ ಸಾಲ ಸಿಗುತ್ತದೆ. ಆದರೆ ಸಾಲ ವಾಪಸಾತಿ ಬ್ಯಾಂಕುಗಳ ಮುಖ್ಯ ಚಿಂತೆಯಾಗಿರುವ ಕಾರಣ ಸಾಲ ಮಂಜೂರು ಮಾಡುವ ಮುನ್ನ ವ್ಯಕ್ತಿಗಳ ಆದಾಯದ ಬಗ್ಗೆ ಬ್ಯಾಂಕುಗಳು ಕಾಳಜಿ ವಹಿಸುತ್ತವೆ.

ಈ ಕೆಳಗಿನ ತರಗತಿಯ ವ್ಯಕ್ತಿಗಳಿಗೆ ವಾಹನ ಸಾಲವನ್ನು ಬ್ಯಾಂಕುಗಳು ನೀಡುತ್ತವೆ:

೧. ಉದ್ಯೋಗಸ್ಥರು (ರಾಜ್ಯ/ಕೇಂದ್ರ ಸರಕಾರ, ಸಾರ್ವಜನಿಕ ರಂಗದ ಕಂಪೆನಿ, ಖಾಸಗಿ ಕಂಪೆನಿ ಹಾಗೂ ಪ್ರತಿಷ್ಟಿತ ಸಂಸ್ಥೆಗಳು)
೨. ಸ್ವಂತ ಉದ್ಯೋಗ, ವೃತ್ತಿಪರರು, ಉದ್ಯಮಿಗಳು, ಸಣ್ಣ ಉದ್ದಿಮೆಯ ಪಾಲುದಾರರು.
೩. ಕೃಷಿ ಮತ್ತಿತರ ಸಂಬಂಧಿ ಚಟುವಟಿಕೆಗಳಲ್ಲಿ ನಿರತರಾದವರು.
ಬ್ಯಾಂಕುಗಳು ಈ ವರ್ಗದವರಿಗೆ ಪ್ರತ್ಯೇಕ ಪ್ರತ್ಯೇಕವಾದ ಆದಾಯ ಮಿತಿಯನ್ನೂ ಹೇರಿವೆ. ೪-ಚಕ್ರದ ಸಾಲಕ್ಕೆ ಸಾಮಾನ್ಯವಾಗಿ ಉದ್ಯೋಗಸ್ಥರಿಗೆ ವಾರ್ಷಿಕ ರೂ ೩ ಲಕ್ಷ ಹಾಗೂ ಇತರರಿಗೆ ವಾರ್ಷಿಕ ರೂ ೪ ಲಕ್ಷದ ಮಿತಿಗಳನ್ನು ವಿವಿಧ ಬ್ಯಾಂಕುಗಳು ಹೇರಿವೆ. ದ್ವಿಚಕ್ರ ಸಾಲಕ್ಕೆ ಇದು ಸುಮಾರು ರೂ ೫೦೦೦೦ ಆಸುಪಾಸಿನಲ್ಲಿದೆ. ಆದಾಯ ತೆರಿಗೆ ರಿಟರ್ನ್ ಅಥವಾ ಫಾರ್ಮ್-೧೬ ಇತ್ಯಾದಿ ಪುರಾವೆಗಳನ್ನು ಬ್ಯಾಂಕುಗಳು ಕೇಳುತ್ತವೆ.

ಸಾಲದ ಮಿತಿ

ಬ್ಯಾಂಕುಗಳು ಆದಾಯದ ಮೇರೆಗೆ ಸಾಲಕ್ಕೆ ಮಿತಿಗಳನ್ನು ಹೇರಿವೆ. ಸುಮಾರಾಗಿ ಉದ್ಯೋಗಸ್ಥರಿಗೆ ಮಾಸಿಕ ವೇತನದ ೪೮ ಪಟ್ಟು, ಉದ್ಯಮಿ/ಸ್ವ-ಉದ್ಯೋಗಿ/ವೃತ್ತಿಪರರಿಗೆ ವಾರ್ಷಿಕ ನಿವ್ವಳ ಆದಾಯದ ೪ ಪಟ್ಟು ಹಾಗೂ ಕೃಷಿಕರಿಗೆ ವಾರ್ಷಿಕ ನಿವ್ವಳ ಆದಾಯದ ೩ ಪಟ್ಟು ಮಿತಿಗಳನ್ನು ನಿಗಧಿಪಡಿಸಿವೆ.

ಮಾರ್ಜಿನ್:

ಸಾಲದಲ್ಲಿ ಗ್ರಾಹಕರ ಪಾಲೂ ಇರುತ್ತದೆ. ನೂರಕ್ಕೆ ನೂರು ಸಾಲವನ್ನು ಬ್ಯಾಂಕುಗಳು ನೀಡುವುದಿಲ್ಲ. ಆದರೆ ಈ ಮಾರ್ಜಿನ್ ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆಯಾಗಿರುತ್ತವೆ.

ಸುಮಾರಾಗಿ ವಾರ್ಷಿಕ ರೂ ೧೦ ಲಕ್ಷದ ಕೆಳಗಿನ ನಿವ್ವಳ ಆದಾಯವುಳ್ಳವರು ವಾಹನದ ಬೆಲೆಯ ೧೫% ಮಾರ್ಜಿನ್ ಅನ್ನು ಗ್ರಾಹಕರೇ ಭರಿಸಬೇಕು. ಉಳಿದ ೮೫% ಮೊತ್ತವನ್ನು ಮಾತ್ರ ಸಾಲವಾಗಿ ಬ್ಯಾಂಕು ನೀಡಬಲ್ಲದು. ವಾರ್ಷಿಕ ರೂ ೧೦ ಲಕ್ಷದ ಮೇಲಿನ ನಿವ್ವಳ ಆದಾಯವುಳ್ಳವರು ವಾಹನದ ಬೆಲೆಯ ೨೦% ಅನ್ನು ಭರಿಸಬೇಕಾದೀತು. ಅಂದರೆ ಬ್ಯಾಂಕುಗಳು ಅಂತಹವರಿಗೆ ಕೇವಲ ೮೦% ಸಾಲ ಮಾತ್ರ ಕೊಡಬಲ್ಲವು. ಕೆಲವು ಬ್ಯಾಂಕುಗಳು ೯೫% ಕಾರ್ ಲೋನ್ ನೀಡುವ ನಿದರ್ಶನಗಳು ಇವೆ. ಹಳೆ ವಾಹನಗಳಿಗೆ ೭೦%-೭೫% ಕಡಿಮೆ ಸಾಲ ಮಾತ್ರವೇ ದೊರಕೀತು. ಸಾಲ ಪಡೆಯುವ ಮುನ್ನ ಇದನ್ನು ಪ್ರತ್ಯೇಕವಾಗಿ ವಿವಿಧ ಬ್ಯಾಂಕುಗಳಲ್ಲಿ ಪರಿಶೀಲಿಸಬೇಕು.

ಇಲ್ಲಿ ವಾಹನದ ಬೆಲೆಯನ್ನು ‘ರಸ್ತೆ ಮೇಲಿನ ಬೆಲೆ’ ಅಥವಾ ‘ಆನ್-ರೋಡ್ ಪ್ರೈಸ್’ ಎಂದು ತೆಗೆದುಕೊಳ್ಳಬೇಕು. ಅಂದರೆ ವಾಹನದ ಶೋರೂಮ್ ಬೆಲೆಯಲ್ಲದೆ ಎಲ್ಲಾ ಕರಗಳು, ವಿಮೆ ಹಾಗು ಪೂರಕಗಳ ಖರ್ಚನ್ನೂ ಸೇರಿಸಲಾಗುವುದು.

ದಾಖಲೆಗಳು:

ವಾಹನ ಸಾಲಕ್ಕೆ ಸೂಕ್ತವಾದ ಈ ಕೆಳಗಿನ ದಾಖಲೆಗಳನ್ನು ಬ್ಯಾಂಕುಗಳು ಅರ್ಜಿಯ ಜೊತೆಯಲ್ಲಿ ಬೇಡಿಯಾವು:

೧. ಗ್ರಾಹಕನ ಭಾವಚಿತ್ರ
೨. ವಿಳಾಸ ಪುರಾವೆ
೩. ಐಡಿ ಪುರಾವೆ
೪. ಬ್ಯಾಂಕು ಹೇಳಿಕೆ
೫. ಆದಾಯ/ ಆದಾಯ ತೆರಿಗೆ ಪುರಾವೆಗಳು

ಬಡ್ಡಿದರ:

ಇದು ಅತಿ ಮುಖ್ಯವಾದ ಷರತ್ತು. ಇದು ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ. ಹೆಚ್ಚಾಗಿ ಇದು ಬೇಸ್ ರೇಟಿನಿಂದ ೦.೫%-೧% ಜಾಸ್ತಿ ಇರುತ್ತದೆ. ಸಾಲ ಕೊಳ್ಳುವ ಮುನ್ನ ಅತಿ ಮುಖ್ಯವಾಗಿ ವಿವಿಧ ಬ್ಯಾಂಕುಗಳ ಬಡ್ದಿದರಗಳನ್ನು ತುಲನೆಮಾಡಿ ನೋಡಬೇಕು. ಇವು ಕಾಲ ಕಾಲಕ್ಕೆ ಬದಲಾಗುತ್ತಾ ಇರುತ್ತವೆ. ಈ ಕೆಳಗಿನ ಟೇಬಲ್ ಸಧ್ಯದ ಸಮಯದಲ್ಲಿನ ೪-ಚಕ್ರ ವಾಹನಗಳಿಗೆ ಕೆಲ ಪ್ರತಿಷ್ಟಿತ ಬ್ಯಾಂಕುಗಳಲ್ಲಿ ವಿಧಿಸುವ ಬಡ್ಡಿದರಗಳನ್ನು ತೋರಿಸುತ್ತದೆ.
¨ÁåAPÀÄ §rØ zÀgÀ
ಬ್ಯಾಂಕು ಬಡ್ಡಿ ದರ
¨ÁåAPÀÄ §rØ zÀgÀ
¨ÁåAPï D¥sï §gÉÆÃqÀ 10.5%
ಬ್ಯಾಂಕ್ ಆಫ್ ಬರೋಡ ೧೦.೫%
¨ÁåAPï D¥sï §gÉÆÃqÀ 10.5%
Lr©L ¨ÁåAPï 10.6%
ಐಡಿಬಿಐ ಬ್ಯಾಂಕ್ ೧೦.೬%
Lr©L ¨ÁåAPï 10.6%
¹ArPÉÃmï ¨ÁåAPï 10.7%
ಸಿಂಡಿಕೇಟ್ ಬ್ಯಾಂಕ್ ೧೦.೭%
¹ArPÉÃmï ¨ÁåAPï 10.7%
PÉ£ÀgÁ ¨ÁåAPï 10.7%
ಕೆನರಾ ಬ್ಯಾಂಕ್ ೧೦.೭%
PÉ£ÀgÁ ¨ÁåAPï 10.7%
AiÀÄƤAiÀÄ£ï ¨ÁåAPï 10.75%
ಯೂನಿಯನ್ ಬ್ಯಾಂಕ್ ೧೦.೭೫%
AiÀÄƤAiÀÄ£ï ¨ÁåAPï 10.75%

ಬಡ್ಡಿ ಲೆಕ್ಕ:

ಬಡ್ದಿಯನ್ನು ಯಾವ ಇತಿ ಲೆಕ್ಕ ಹಾಕಲಾಗುತ್ತದೆ ಅನ್ನುವುದೂ ಕೂಡಾ ಮುಖ್ಯ. ಬಹುತೇಕ ಮಂಥ್ಲಿ ರೆಡ್ಯೂಸಿಂಗ್ ಬ್ಯಾಲನ್ಸ್ ಪದ್ಧತಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಆದರೆ ಡೈಲಿ ರೆಡ್ಯೂಸಿಂಗ್ ಬ್ಯಾಲನ್ಸ್ ಪದ್ಧತಿ ಇದ್ದರೆ ಅದರಲ್ಲಿ ಪ್ರತಿ ದಿನದ ಮೊತ್ತದ ಮೇಲೆ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಅಂತಿಮ ದಿನದ ಮೊದಲೇ ಇಎಂಐ ಕಟ್ಟುವವರಿಗೆ ಇದರಿಂದ ಕೊಂಚ ಉಳಿತಾಯವಾದೀತು. ಆದೂದರಿಂದ ಸಾಲ ತೆಗೆದುಕೊಳ್ಳುವ ಮುನ್ನ ಬಡ್ಡಿಯ ಲೆಕ್ಕವನ್ನು ಬ್ಯಾಂಕು ಯಾವ ರೀತಿ ಹಾಕುತ್ತದೆ ಎನ್ನುವುದನ್ನು ಕೇಳಿ ತಿಳಿದುಕೊಳ್ಳುವುದು ಉಚಿತ.

ವಾಪಸಾತಿ:

ವಾಹನ ಸಾಲಗಳನ್ನು ಬಹುತೇಕ ೮೪ ಮಾಸಿಕ ಕಂತುಗಳಲ್ಲಿ (ಇಎಂಐ) ಹಿಂತಿರುಗಿಸಬೇಕು. ಹಳೆಯ ವಾಹನಗಳಿಗೆ ಈ ಅವಧಿ ಕಡಿಮೆಯಿರಬಹುದು ಉದಾ: ೬೦ ಮಾಸಿಕ ಕಂತುಗಳು.

ಪ್ರಿ-ಪೇಯ್ಮೆಂಟ್:

ಅವಧಿಪೂರ್ವ ವಾಪಸಾತಿಯನ್ನು ಬ್ಯಾಂಕುಗಳು ಸ್ವೀಕರಿಸುತ್ತವೆ. ಇದಕ್ಕೆ ಪ್ರತ್ಯೇಕವಾದ ದಂಡ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ.

ಸಂಸ್ಕರಣಾ ವೆಚ್ಚ:

ವಾಹನ ಸಾಲಗಳ ಅರ್ಜಿಗಳ ಮೇಲೆ ಸಂಸ್ಕರಣಾ ವೆಚ್ಚವನ್ನು ಬ್ಯಾಂಕುಗಳು ಹೇರುತ್ತವೆ. ಸುಮಾರಾಗಿ ಸಾಲ ಮೊತ್ತದ ೦.೨೫%-೦.೫%, ಒಂದು ಕನಿಷ್ಠ-ಗರಿಷ್ಠ ಮಿತಿಯೊಳಗೆ (ಉದಾ: ರೂ ೧೦೦೦-೫೦೦೦) ಹೇರುತ್ತವೆ. ಆದರೆ ಎಷ್ಟೋ ಬಾರಿ ಬ್ಯಾಂಕುಗಳು ಸಂಸ್ಕರಣಾ ಶುಲ್ಕದ ವಿನಾಯತಿಯನ್ನು ಘೋಷಿಸುತ್ತದೆ. ಅಂತಹ ಅವಧಿಇಯಲ್ಲಿ ಸಾಲಪಡಕೊಂಡರೆ ಅಷ್ಟರ ಮಟ್ಟಿಗೆ ಉಳಿತಾಯವಾದೀತು.

ಜಾಮೀನು:

ವಾಹನ ಸಾಲಕ್ಕೆ ಸೂಕ್ತವಾದ ಜಾಮೀನನ್ನು ಬ್ಯಾಂಕುಗಳು ತೆಗೆದುಕೊಳ್ಳುತ್ತವೆ. ವಾಹನಗಳನ್ನು ಬ್ಯಾಂಕಿಗೆ ಹೈಪೋಥಿಕೇಟ್ ಮಾಡುತ್ತವೆ; ಬೇರೊಬ್ಬರ ಗ್ಯಾರಂಟಿಯನ್ನು ಬಯಸುತ್ತವೆ ಅಥವಾ ಬೇರೆ ಜಾಮೀನನ್ನು ಕೇಳುತ್ತವೆ. ಸಾಲ ವಾಪಸಾತಿಯಾಗದ ಸಮಯಕ್ಕೆ ಇಂತಹ ಜಾಮೀನು/ಗ್ಯಾರಂಟಿಗಳು ಉಪಯೋಗಕ್ಕೆ ಬರುತ್ತವೆ. ಬೇರೆ ಬೇರೆ ಬ್ಯಾಂಕುಗಳು ಸಾಲದ ಮೊತ್ತಕ್ಕೆ ತಮ್ಮ ನಿಯಮಾನುಸಾರ ಗ್ಯಾರಂಟಿ/ಜಾಮೀನುಗಳನ್ನು ನಿಗಧಿಪಡಿಸಿವೆ. ಸಾಲ ಪಡೆದುಕೊಳ್ಳುವ ಮುನ್ನ ಇವನ್ನು ಪರಿಶೀಲಿಸಬೇಕು.

ವಿ.ಸೂ: ಬ್ಯಾಂಕುಗಳಿಂದ ಬ್ಯಾಂಕುಗಳಿಗೆ ಸಾಲದ ನಿಯಮಗಳಲ್ಲಿ ವ್ಯತ್ಯಾಸಗಳಿರುತ್ತವೆ. ಸಾಲ ಪಡೆಯುವ ಮುನ್ನ ನಾಲ್ಕಾರು ಬ್ಯಾಂಕುಗಳನ್ನು ಸರ್ವೆ ಮಾಡಿಯೇ ಸೂಕ್ತ ನಿರ್ಧಾರಕ್ಕೆ ಬರಬೇಕು.

***

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s